ಸನಯಾ ಇರಾನಿ (ಈಗ ಸೆಹೆಗಲ್) (ಜನನ : ೧೭ ಸೆಪ್ಟೆಂಬರ್ ೧೯೮೩)ಇವರು ಭಾರತೀಯ ದೂರದರ್ಶನ ನಟಿ. ಮಿಲೇ ಜಬ್ ಹಮ್ ತುಮ್ ಚಿತ್ರದಲ್ಲಿ ಗುಂಜನ್ ಮತ್ತು ಇಸ್ ಪ್ಯಾರ್ ಕೊ ಕ್ಯಾ ನಾಮ್ ದೂ? ಧಾರವಾಹಿಯಲ್ಲಿ ಖುಷಿ ಪಾತ್ರದಲ್ಲಿ ಅಭಿನಯಿಸಿ ಹೆಸರುವಾಸಿಯಾಗಿದ್ದಾರೆ. . ೨೦೧೫ ರಲ್ಲಿ ಇರಾನಿ ಝಲಕ್ ದಿಖ್ಲಾ ಜಾ ಡಾನ್ಸ್ ಶೋನ ೮ನೇ ಋತುವಿನಲ್ಲಿ ಫೈನಲಿಸ್ಟ್ ಆಗಿದ್ದರು. ನಂತರ ಮೋಹಿತ್ ಸೆಹಗಲ್ ಅವರೊಂದಿಗೆ ೨೦೧೭ ರಲ್ಲಿ ನಚ್ ಬಲಿಯೆಯಲ್ಲಿ ಭಾಗವಹಿಸಿ ಮೂರನೇ ಸ್ಥಾನ ಪಡೆದರು. == ಆರಂಭಿಕ ಜೀವನ == ಇರಾನಿ ,೧೭ ಸೆಪ್ಟೆಂಬರ್ ೧೯೮೩ ರಂದು ಮುಂಬೈನಲ್ಲಿ ಪಾರ್ಸಿ ಕುಟುಂಬದಲ್ಲಿ ಜನಿಸಿದರು. ಇವರು ಊಟಿಯ ಬೋರ್ಡಿಂಗ್ ಶಾಲೆಯಲ್ಲಿ ಏಳು ವರ್ಷಗಳ ಕಾಲ ಕಲಿತರು . ನಂತರ ಇವರು ಸಿಡೆನ್ಹ್ಯಾಮ್ ಕಾಲೇಜಿನಿಂದ ಪದವಿ ಪಡೆದರು ಮತ್ತು ಮಾಡೆಲ್ ಆಗುವ ಮೊದಲು ಎಂಬಿಎ ಪದವಿಯನ್ನು ಪಡೆಯುತ್ತಿದ್ದರು. == ವೃತ್ತಿ == === ಮಾಡೆಲಿಂಗ್ ವೃತ್ತಿ (೨೦೦೫-೦೭) === ಇರಾನಿ ಇವರು ಯಶ್ ರಾಜ್ ಫಿಲ್ಮ್ ಫನಾ (೨೦೦೬)ಎಂಬ ಚಿತ್ರದಲ್ಲಿ ಮೆಹಬೂಬಾ ಎಂಬ ಕಿರು ಪಾತ್ರದಲ್ಲಿ ಅಭಿನಯಿಸುವ ಮೂಲಕ ತನ್ನ ನಟನಾ ಜೀವನಕ್ಕೆ ಪಾದಾರ್ಪಿಸಿದರು. ನಟಿ ತನ್ನ ಪಾತ್ರದ ಬಗ್ಗೆ ಮಾತನಾಡುತ್ತಾ, " ಆಕಸ್ಮಿಕವಾಗಿ ನನಗೆ ಆ ಪಾತ್ರ ಸಿಕ್ಕಿತು. ಅಮೀರ್ ಖಾನ್ ಮತ್ತು ಕಾಜೋಲ್ ನನ್ನ ನೆಚ್ಚಿನ ನಟ-ನಟಿಯರು ಆಗಿರುವುದರಿಂದ ಇದು ನನ್ನ ಒಂದು ಕನಸು ನನಸಾಯಿತು . " ಬಾಲಿವುಡ್ ತಾರೆಗಳಾದ ಶಾರುಖ್ ಖಾನ್, ಕರೀನಾ ಕಪೂರ್ ಮತ್ತು ಇತರರೊಂದಿಗೆ ಕೆಲಸ ಮಾಡುತ್ತಾ ಜಾಹೀರಾತು ಪ್ರದರ್ಶನದಲ್ಲಿ ಒಂದು ವರ್ಷ ಕಳೆದರು. ನಂತರ ಜಗ್ಜಿತ್ ಸಿಂಗ್ ರವರ ತುಮ್ಕೊ ದೇಖಾ ಎಂಬ ಚಿತ್ರದ ಮೂಲಕ ಇವರು ತಮ್ಮ ವೃತ್ತಿಜೀವನಕ್ಕೆ ಪಾದಾರ್ಪಣೆ ಮಾಡಿದರು. === ಇತರ ಪ್ರದರ್ಶನಗಳು === ಆಗಸ್ಟ್ ೨೦೧೩ ರಲ್ಲಿ, ಇರಾನಿ ತನ್ನ ನೆಚ್ಚಿನ ಸ್ನೇಹಿತೆ ದ್ರಷ್ಟಿ ಧಾಮೀಯ ಜೊತೆ ಝಲಕ್ ದಿಖ್ಲಾ ಜಾ ಎಂಬ ನೃತ್ಯ ಪ್ರದರ್ಶನದಲ್ಲಿ ಸಂಕ್ಷಿಪ್ತ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡರು. ಜೂನ್ ೨೦೧೪ ರಲ್ಲಿ ಆಶಿಶ್ ಶರ್ಮಾ ಅವರ ಜೊತೆ ಝಲಕ್ ದಿಖ್ಲಾ ಜಾ ಎಂಬ ನೃತ್ಯ ಪ್ರದರ್ಶನದ ೭ನೇ ಋತುವಿನಲ್ಲಿ ಇವರು ಮತ್ತೆ ಕಾಣಿಸಿಕೊಂಡರು. ನಂತರ ಇವರು ಇಸ್ ಪ್ಯಾರ್ ಕೋ ಕ್ಯಾ ನಾಮ್ ದೂ?ಏಕ್ ಬಾರ್ ಫಿರ್! ಎಂಬ ಧಾರವಾಹಿರಲ್ಲಿ ಆಸ್ಥಾ ( ಶ್ರೇನು ಪಾರಿಖ್ ) ಅವರನ್ನು ಪರಿಚಯಿಸಲು ಕಾಣಿಸಿಕೊಂಡಿದ್ದಾರೆ. ಬಿಗ್ ಬಾಸ್ ೭ರ ಗ್ರ್ಯಾಂಡ್ ಫಿನಾಲೆಯಲ್ಲಿ ಆಶಿಶ್ ಶರ್ಮಾ, ಪ್ರೀತಿಕಾ ರಾವ್ ಮತ್ತು ಹರ್ಷದ್ ಅರೋರಾ ಅವರೊಂದಿಗೆ ಇರಾನಿಯವರು ವಿಶೇಷ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡರು. ಅವರು ಮಾರ್ಚ್ ಮತ್ತು ಜೂನ್ ೨೦೧೪ ರಲ್ಲಿ ಬೇಇಂತ್ಹಾದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡರು. ಇವರು ಸ್ಟಾರ್ ಪ್ಲಸ್ ಪರವಾಗಿ ಯುಕೆ ಪ್ರವಾಸ ಕೈಗೊಂಡರು. ನಂತರ ಏಪ್ರಿಲ್ ೩೦, ೨೦೧೩ ರಂದು ಲಂಡನ್ನಲ್ಲಿ ಬರ್ಮಿಂಗ್ಹ್ಯಾಮ್ನಲ್ಲಿ ಮತ್ತು ೧ ಮೇ ೨೦೧೩ ರಂದು ಲೀಸೆಸ್ಟರ್‌ನಲ್ಲಿ ಕಾಣಿಸಿಕೊಂಡರು.ಅಲ್ಲಿ ಅಭಿಮಾನಿಗಳೊಂದಿಗೆ ಭೇಟಿಯಾಗಿ ಶುಭಾಶಯ ಕೋರಿದರು ಹಾಗೂ ಅವರನ್ನು ಅಲ್ಲಿ ಭಾರೀ ಜನಸಮೂಹ ಸ್ವಾಗತಿಸಿತು. ೨೫ ನವೆಂಬರ್ ೨೦೧೩ ರಂದು ಸ್ಟಾರ್ ಪರಿವಾರ್ ಲೈವ್ ಕಾರ್ಯಕ್ರಮಕ್ಕಾಗಿ ಇರಾನಿ ಎರಡನೇ ಬಾರಿಗೆ ಲಂಡನ್ಗೆ ಭೇಟಿ ನೀಡಿದರು. ಆರ್ಟೆಸಿಯಾ ಶಾಪಿಂಗ್ ಫೆಸ್ಟಿವಲ್ ನಲ್ಲಿ ಪಾಲ್ಗೊಳ್ಳಲು ಇವರು ೮ ಡಿಸೆಂಬರ್ ೨೦೧೩ ರಂದು ಲಾಸ್ ಎಂಜಲೀಸ್ಸಿ.ಎಗೆ ಭೇಟಿ ನೀಡಿದರು . == ಮಾಧ್ಯಮ == ಇವರು ಪೀಪಲ್ ಮ್ಯಾಗಸಿನ್ ನಲ್ಲಿ (ಭಾರತ) ನಲವತ್ತು ಅತ್ಯಂತ ಸುಂದರ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ದೂರದರ್ಶನ ನಟಿ. ನಟನೆಯ ಹೊರತಾಗಿ, ಇವರು ನೃತ್ಯ ಕೌಶಲ್ಯಕ್ಕೆ ಹೆಸರುವಾಸಿಯಾಗಿದ್ದಾರೆ. ಕೆ-ಮೂಲದ ಪತ್ರಿಕೆಯಲ್ಲಿ ಈಸ್ಟರ್ನ್ ಐ ಇವರನ್ನು ೨೦೧೨ ರಲ್ಲಿ ೫೦ ಸೆಕ್ಸಿಯೆಸ್ಟ್ ಏಷ್ಯನ್ ಮಹಿಳಾ ಪಟ್ಟಿಯಲ್ಲಿ ಸ್ಥಾನವನ್ನು ಕೊಟ್ಟಿತು. ಪುನಃಈಸ್ಟರ್ನ್ ಐ ಪತ್ರಿಕೆಯಲ್ಲಿ ಹತ್ತನೇ ಸ್ಥಾನವನ್ನು ಪಡೆದುಕೊಂಡರು. ೨೦೧೪ ರಲ್ಲಿ, ರೆಡಿಫ್ನಲ್ಲಿ ಇವರು ಟಾಪ್ ೧೦ ಅತ್ಯುತ್ತಮ ದೂರದರ್ಶನ ನಟಿಯರಲ್ಲಿಯೂ ಸ್ಥಾನ ಪಡೆದರು. ನವೆಂಬರ್ ೨೦೧೪ ರಲ್ಲಿ, ಬಿಗ್ ಬಾಸ್ ೮ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಲು ಸನಾಯಾರವರನ್ನು ಸಂಪರ್ಕಿಸಲಾಯಿತು ಆದರೆ ಇವರು ಆ ಅವಕಾಶವನ್ನು ನಿರಾಕರಿಸಿದರು. == ಫಿಲ್ಮೋಗ್ರಾಫಿ == === ವೆಬ್ ಸರಣಿ === == ಟೆಲಿವಿಷನ್ == === ಅತಿಥಿ ಪಾತ್ರಗಳು === ೨೦೧೨ : ಸ್ಟಾರ್ ಪರಿವಾರ್ ಕಾ ತ್ಯೋಹರ್ ೨೦೧೩ : ಸಹ - ನಿರೂಪಕರಾಗಿ ಇಶ್ಕ್ ವಾಲಾ ಲವ್ ( ಕರಣ್ ಗ್ರೋವರ್ ಅವರೊಂದಿಗೆ) ೨೦೧೩ : ಇಸ್ ಪ್ಯಾರ್ ಕೋ ಕ್ಯಾ ನಾಮ್ ದೂ? . . . ಏಕ್ ಬಾರ್ ಫಿರ್ ಖುಷಿ (ಆಸ್ಥಾರವರನ್ನು ಪರಿಚಯಿಸಲು) == ವೈಯಕ್ತಿಕ ಜೀವನ == ೨೧೦೫ ರ ಡಿಸೆಂಬರ್‌ನಲ್ಲಿ ಇರಾನಿಯವರು ಮೋಹಿತ್ ಸೆಹಗಲ್‌ನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡರು. ನಂತರ ಗೋವಾದಲ್ಲಿ ೨೫ ಜನವರಿ ೨೦೧೬ ರಂದು ಮೋಹಿತ್ ರವರೊಂದಿಗೆ ವಿವಾಹವಾದರು. == ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು == == ಉಲ್ಲೇಖಗಳು ==